“ಮಳೆ ಬರುತ್ತಿದ್ದರೂ ಸಹ ನಾನು ನನ್ನ ಹೊಲಿಗೆ ಯಂತ್ರ, ಮೇಜು, ಮೇಲ್ಛಾವಣಿ ಮತ್ತು ಇತರ ಸಲಕರಣೆಗಳನ್ನು ಪ್ರತಿದಿನ ತೆಗೆದುಕೊಂಡು ಹೋಗುತ್ತೇನೆ ಮತ್ತು ವಾಪಾಸು ತರುತ್ತೇನೆ,” ಎಂದು ದೊಡ್ಡ ಮರದ ಕೆಳಗೆ ತನ್ನ ಹೊಲಿಗೆ ಯಂತ್ರವನ್ನು ಇಟ್ಟುಕೊಂಡಿದ್ದ ಟೈಲರ್ ದೌಲತ್ ರಾಮ್ ಹೇಳುತ್ತಾರೆ. ಮುಖ್ಯ ಮಾರುಕಟ್ಟೆಯಿಂದ ಸರಿಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಗುರುಗ್ರಾಮ್ ಸೆಕ್ಟರ್ 40ರಲ್ಲಿ ಜನನಿಬಿಡ ರಸ್ತೆಯ ಫುಟ್‌ʼಪಾತ್ ಮಾರ್ಗದ ಮೇಲೆ ಹಳದಿ, ತಾತ್ಕಾಲಿಕ ಮೇಲ್ಛಾವಣಿ ಹಾಕಿಕೊಂಡು ಇರುವ ಅವ ಜಾಗವನ್ನು ಗುರುತಿಸಲಾಗಿದೆ. “ನನ್ನ ಹಳ್ಳಿಯಲ್ಲಿ ಹೆಚ್ಚು ವ್ಯಾಪಾರವಿಲ್ಲ ಅಥವಾ ನನ್ನ ಬಳಿ ಯಾವುದೇ ಜಮೀನು ಇಲ್ಲ, ಹಾಗಾಗಿ ನಾನು ನಗರಕ್ಕೆ ತೆರಳಿದೆ” ಎಂದು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ರಾಮ್‌ಗಢ್ ತಹಸಿಲ್‌ನ 50 ವರ್ಷ ವಯಸ್ಸಿನ ಅವರು ವಿವರಿಸುತ್ತಾರೆ.

ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಿಂದ 2011 ರಲ್ಲಿ ಗುರುಗ್ರಾಮ್‌ಗೆ ತೆರಳಿದ ರಮೇಶ್, ದೌಲತ್ ರಾಮ್‌ನಿಂದ ಹೆಚ್ಚು ದೂರವಿಲ್ಲ. HUDA ಮಾರುಕಟ್ಟೆಯಲ್ಲಿ ತಿಂಗಳಿಗೆ 40,000 ಬಾಡಿಗೆಯನ್ನು ಕೊಟ್ಟು, ಬೇರೆ ಖರ್ಚುಗಳನ್ನು ನೀಗಿಸಿಕೊಂಡು ವ್ಯವಹಾರ ಮಾಡಲು ಅವನಿಂದ ಸಾಧ್ಯವಿಲ್ಲ. ಹಾಗಾಗಿ ಈ 38 ವರ್ಷ ವಯಸ್ಸಿನವನು ತನ್ನ ಹೊಲಿಗೆ ಟೇಬಲ್ ಅನ್ನು ಫುಟ್‌ʼಪಾತ್ ಮಾರ್ಗದ ಮೇಲೆ ಸೊಂಪಾಗಿ ಹರಡಿರುವ ಜಾಮೂನ್ ಮರದ ಕೆಳಗೆ ಇಡುತ್ತಾನೆ. “ಕೋವಿಡ್ʼಗಿಂತ ಮೊದಲು, ನಾನು ದಿನಕ್ಕೆ 500 ರೂಪಾಯಿಗಳನ್ನು ದುಡಿಯುತ್ತಿದ್ದೆ. ಈಗ, ಅದು ತುಂಬಾ ಕಷ್ಟಕರವಾಗಿದೆ,” ಎಂದು ಅವರು ಹಂಚಿಕೊಂಡರು. ಸಂಜೆ, ರಮೇಶ್ (ಇದು ಅವನು ಹಂಚಿಕೊಳ್ಳಲು ಆಯ್ಕೆಮಾಡಿದ ಹೆಸರು) ಎರಡು ಕಿಲೋಮೀಟರ್ ದೂರದಲ್ಲಿರುವ ಬಾಡಿಗೆ ಮನೆಗೆ ಹೋಗುತ್ತಾನೆ ಮತ್ತು ಕಳ್ಳತನವನ್ನು ತಡೆಯಲು ಮರಕ್ಕೆ ತನ್ನ ಹೊಲಿಗೆ ಟೇಬಲ್ಅನ್ನು ಕಟ್ಟಿಹಾಕುತ್ತಾನೆ. ದೌಲತ್ ರಾಮ್ ಅವರಂತೆ, ಅವರು ತಮ್ಮ ಹೊಲಿಗೆ ಯಂತ್ರ ಮತ್ತು ಇತರ ಪರಿಕರಗಳನ್ನು ನಿಷ್ಠಾವಂತ ಗ್ರಾಹಕರ ಮನೆಯ ಹತ್ತಿರದ ಕಾಂಪೌಂಡ್‌ನಲ್ಲಿ ಇಟ್ಟಿರುತ್ತಾರೆ.

“ನಾನು ನನ್ನ ಟೇಬಲ್, ಯಂತ್ರ, ಉಪಕರಣಗಳು ಮತ್ತು ಬಟ್ಟೆಗಳನ್ನು 9:30 ಗಂಟೆಗೆ ಹೊಂದಿಸಿ ಜೋಡಿಸಿಕೊಳ್ಳುತ್ತೇನೆ ಮತ್ತು ಸಂಜೆ 7:30 ರವರೆಗೆ ಇಲ್ಲೇ ಇರುತ್ತೇನೆ” ಎಂದು ಬಿಹಾರದ ಪುರ್ನಿಯಾ ಜಿಲ್ಲೆಯ ಮತ್ತೊಬ್ಬ 32 ವರ್ಷದ ವಲಸಿಗ ಟೈಲರ್ ಮೊಹಮ್ಮದ್ ಅನ್ಸಾರಿ ಹೇಳುತ್ತಾರೆ. ಮೊಹಮ್ಮದ್ 2011 ರಲ್ಲಿ ಗುರುಗ್ರಾಮಕ್ಕೆ ಬಂದರು, ಉತ್ತಮ ಜೀವನವನ್ನು ಹುಡುಕುತ್ತಿದ್ದರು. ಮಾರ್ಚ್ 2019 ರಲ್ಲಿ ಮೊದಲ ಲಾಕ್‌ಡೌನ್ ಸಮಯದಲ್ಲಿ ಅವರ ಕೆಲಸ ಸ್ಥಗಿತಗೊಂಡಾಗ, ಅವರು ತಮ್ಮ ಗ್ರಾಮವಾದ ಬನ್ಮಂಖಿಗೆ ಹಿಂತಿರುಗಿದರು ಮತ್ತು ಅವರು ಆಗಸ್ಟ್ 2021 ರಲ್ಲಿ ನಗರಕ್ಕೆ ವಾಪಾಸಾಗುವವರೆಗೂ ಕೃಷಿ ಮಾಡಿದರು.

ಅನುಭವಿ ಟೈಲರ್ ಬಳಿ ಎರಡು ವರ್ಷಗಳ ತರಬೇತಿ ಪಡೆದ ನಂತರ, ಕಮಾಲ್ ತನ್ನ ಸ್ವಂತ ಹೊಲಿಗೆ ಯಂತ್ರವನ್ನು 6,000 ರೂಪಾಯಿಗಳಿಗೆ ಖರೀದಿಸಿ, ದೌಲತ್ ರಾಮ್ ಮತ್ತು ರಮೇಶ್‌ನಿಂದ ಸ್ವಲ್ಪ ದೂರದಲ್ಲಿರುವ ಬೇವಿನ ಮರದ ಕೆಳಗೆ ತನ್ನ ಹೊಸ ವ್ಯವಹಾರವನ್ನು ಶುರು ಮಾಡಿದರು. ಇವರು 2006ರಲ್ಲಿ ಬಿಹಾರದ ಅರಾರಿಯಾ ಜಿಲ್ಲೆಯಿಂದ ಗುರುಗ್ರಾಮಕ್ಕೆ ತೆರಳಿದ್ದರು.

ಈ ನಾಲ್ಕು ಟೈಲರ್‌ಗಳು – ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದಿಂದ ವಲಸಿಗರು – ಅಂಗಡಿಯನ್ನು ಸ್ಥಾಪಿಸಿದ್ದಾರೆ, ಪ್ರತಿಯೊಬ್ಬರೂ ಗುರುಗ್ರಾಮ್‌ನಲ್ಲಿ ಮರದ ಕೆಳಗೆ ನೆರಳಿನ ಸ್ಥಳವನ್ನು ಆರಿಸಿಕೊಳ್ಳುತ್ತಾರೆ, ನಿರ್ದಿಷ್ಟ ಪ್ರದೇಶಕ್ಕೆ ಉಪಚರಿಸುತ್ತಾರೆ, ಬದಲಾವಣೆಗಳು ಮತ್ತು ರಿಪೇರಿಗಳನ್ನು ಮಾಡುತ್ತಾರೆ ಮತ್ತು ಕೆಲವೊಮ್ಮೆ ಸಂಪೂರ್ಣ ಭಾಗವನ್ನು ತಯಾರಿಸುತ್ತಾರೆ. ಒಂದು ಜೊತೆ ಪ್ಯಾಂಟ್‌ನ ಉದ್ದವನ್ನು ಕಡಿಮೆ ಮಾಡುವುದರಿಂದ ಅವುಗಳಿಗೆ ಸುಮಾರು ರೂ. 20-40, ಬಟ್ಟೆಯನ್ನು ಅವಲಂಬಿಸಿ; ಹೆಚ್ಚು, ಅದನ್ನು ಕೈಯಿಂದ ಮಾಡಿದರೆ.

“ಹೆಚ್ಚಿನ ದಿನಗಳಲ್ಲಿ ನಾನು ರಾತ್ರಿ 10 ಗಂಟೆಯವರೆಗೆ ಇಲ್ಲಿ ಕುಳಿತುಕೊಳ್ಳುತ್ತೇನೆ. ದಿನಕ್ಕೆ ಐದು ಜನ ಗ್ರಾಹಕರು ಇದ್ದೇ ಇರುತ್ತಾರೆ. ಹಾಗಾಗಿ ಅವರ ಎಲ್ಲಾ ಬಟ್ಟೆಗಳನ್ನು ಹೊಲಿಯುವವರೆಗೂ ನಾನು ಹೊರಡಲು ಇಷ್ಟಪಡುವುದಿಲ್ಲ, ”ಎಂದು ಕಮಾಲ್ ಹೇಳುತ್ತಾರೆ, ಅವರು ಹಳ್ಳಿಯಲ್ಲಿರುವ ತಮ್ಮ ಕುಟುಂಬಕ್ಕೆ ಪ್ರತಿ ತಿಂಗಳು ಕಳಿಸಲು ಹಣವನ್ನು ಉಳಿಸುತ್ತಾರೆ

ಲಾಕ್‌ಡೌನ್ ಅವರ ದೈನಂದಿನ ಆದಾಯದ ಮೇಲೆ ತಕ್ಷಣದ ಪರಿಣಾಮ ಬೀರಿತು. “ಮೊದಲ ಲಾಕ್‌ಡೌನ್‌ ಸಮಯದಲ್ಲಿ ನನಗೆ ಇಲ್ಲಿ ಕೆಲಸ ಇರಲಿಲ್ಲ. ಏನು ಮಾಡಬೇಕೆಂದು ತಿಳಿದಿರಲಿಲ್ಲ,” ಎನ್ನುವ ಕಮಾಲ್ ತನ್ನ ಹಳ್ಳಿಗೆ ಹೊರಟು ಒಂಬತ್ತು ತಿಂಗಳ ನಂತರ ನಗರಕ್ಕೆ ಮರಳಿದರು. “ನಾನು ಹಿಂತಿರುಗಿದ ನಂತರವೂ ಯಾವುದೇ ಗ್ರಾಹಕರು ಇರಲಿಲ್ಲ. ಈಗ, ನಾನು ಹೆಚ್ಚಿನ ದಿನಗಳಲ್ಲಿ ಬೆಳಗ್ಗೆ 8:30ಕ್ಕೆ ತಯಾರಾಗುತ್ತೇನೆ ಮತ್ತು 9 ಗಂಟೆಗೆ ಇಲ್ಲಿಗೆ ತಲುಪುತ್ತೇನೆ. ರಾತ್ರಿ 10ರವರೆಗೆ ಇಲ್ಲಿ ಕುಳಿತುಕೊಳ್ಳುತ್ತೇನೆ. ದಿನಕ್ಕೆ ಐದರವರೆಗೆ ಗ್ರಾಹಕರು ಬರುತ್ತಿದ್ದಾರೆ, ಹಾಗಾಗಿ ಅವರ ಎಲ್ಲಾ ಬಟ್ಟೆಗಳನ್ನು ಹೊಲಿಯುವವರೆಗೂ ನಾನು ಹೊರಡಲು ಇಷ್ಟಪಡುವುದಿಲ್ಲ,” ಎಂದು ಅವರು ಹೇಳಿದರು.

ಕಮಾಲ್‌ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಹಿರಿಯ ಮಗುವಿಗೆ ಐದು ವರ್ಷ ಮತ್ತು ಅವರ ಊರಾದ ದುಬಾದಲ್ಲಿ ಸರ್ಕಾರಿ ಪ್ರಿಸ್ಕೂಲ್‌ಗೆ ದಾಖಲಾಗಿದ್ದಾನೆ; ಕಿರಿಯವನಿಗೆ ಎರಡು ವರ್ಷ. ಅವರು ಹಳ್ಳಿಯಲ್ಲಿರುವ ತಮ್ಮ ಕುಟುಂಬಕ್ಕೆ ಕಳುಹಿಸಲು ಪ್ರತಿ ತಿಂಗಳು ಹಣವನ್ನು ಉಳಿಸುತ್ತಾರೆ ಮತ್ತು ಕಾಲಕಾಲಕ್ಕೆ ಊರಿಗೆ ಹೋಗಿ ಅವರನ್ನು ಭೇಟಿ ಮಾಡುತ್ತಾರೆ.

ರಮೇಶ್‌ ಅವರಿಗೂ ದೈನಂದಿನ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖ ಎದುರಾಗಿದ್ದರಿಂದಾಗಿ ಅವರಿಗೂ ಅಲ್ಲಿ ಬದುಕುವುದು ಕಷ್ಟವಾಯಿತು. ಹೀಗಾಗಿ ಅವರು ತನ್ನ ಊರಾದ ಚೈನ್‌ಪುರಕ್ಕೆ ಹಿಂತಿರುಗಿದರು. ಕೆಲವು ತಿಂಗಳುಗಳ ನಂತರ ಅವರು ಗುರುಗ್ರಾಮ್‌ಗೆ ಹಿಂತಿರುಗಿದಾಗ ಅವರು ಹೇಳಿದಂತೆ, “ನಾನು ಗ್ರಾಹಕರನ್ನು ಕಾಣುವ ಭರವಸೆಯಲ್ಲಿ ಪ್ರತಿದಿನ ಇಲ್ಲಿಗೆ ಬರುತ್ತೇನೆ. ಇಲ್ಲಿ ನನಗೆ ಸರಿಯಾದ ಆಶ್ರಯವಿಲ್ಲದ ಕಾರಣ ನಾನು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಕೆಲಸ ಮಾಡುತ್ತೇನೆ, ಮಳೆಯ ದಿನಗಳಲ್ಲಿ [ಮಾತ್ರ] ರಜೆ ಮಾಡುತ್ತೇನೆ. ಅವರ ಮಕ್ಕಳು – ಒಬ್ಬರು 16 ಮತ್ತು ಒಬ್ಬರು 13 ವರ್ಷ (ಅವರು ತಮ್ಮ ಮಕ್ಕಳ ಹೆಸರನ್ನು ಹಂಚಿಕೊಳ್ಳಲು ಬಯಸುವುದಿಲ್ಲ) – ಹಳ್ಳಿಯಲ್ಲಿರುವ ಸಣ್ಣ ಖಾಸಗಿ ಶಾಲೆಗೆ ಹೋಗುತ್ತಾರೆ. ಲಾಕ್‌ಡೌನ್ ಸಮಯದಲ್ಲಿ, ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅವರಿಗೆ ಯಾವುದೇ ಮಾರ್ಗವಿಲ್ಲ ಮತ್ತು ಆದ್ದರಿಂದ ಅವರು ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ್ದಾರೆ. ಮೊದಲ ಲಾಕ್‌ಡೌನ್‌ನಿಂದ ಅವರು ಆಗಾಗ ಕೆಲಸ ಮಾಡುತ್ತಿದ್ದಾರೆ, ಕೋವಿಡ್ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದಾಗಿ ಕೆಲಸದಿಂದ ಹಿಂದೆ ಸರಿಯಬೇಕಾಯಿತು. “ನನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳು ಹಳ್ಳಿಗೆ ಹಿಂತಿರುಗಿದ್ದಾರೆ, ನಾನು ಅವರಿಗೆ ಹಣವನ್ನು ಕಳುಹಿಸಲು ಕಾಯುತ್ತಿದ್ದೇನೆ” ಎಂದು ಅವರು ಹೇಳುತ್ತಾರೆ.

“ಮೈ ವಾಪಾಸ್ ಗಾವ್ ಗಯಾ ಥಾ, ಯಹಾ ಖಾನೆ ಕೆ ಲಿಯೇ ಕುಚ್ ಭೀ ನಹಿ ಥಾ [ಇಲ್ಲಿ ನನಗೆ ತಿನ್ನುವುದಕ್ಕೆ ಏನೂ ಸಿಗುತ್ತಿಲ್ಲದ ಕಾರಣದಿಂದಾಗಿ ನಾನು ಹಳ್ಳಿಗೆ ಹಿಂತಿರುಗಿದೆ]. ನಾನು ಮೂರು ತಿಂಗಳ ನಂತರ ಮರಳಿ ಬಂದೆ” ಎಂದು ದೌಲತ್ ರಾಮ್ ಹೇಳಿದರು, ಅವರು ಮೊದಲ ಲಾಕ್‌ಡೌನ್‌ನಲ್ಲಿ ಅಲ್ವಾರ್‌ನಲ್ಲಿರುವ ತಮ್ಮ ಹಳ್ಳಿಗೆ ಮರಳಿದರು. ಅವರು ಗುರುಗ್ರಾಮ್‌ಗೆ ಹಿಂತಿರುಗಿದಾಗ, ಅವರ ಗ್ರಾಹಕರು ಅರ್ಧಕ್ಕಿಂತ ಕಡಿಮೆ ಇರುವುದು ಅವರಿಗೆ ತಿಳಿಯಿತು ಪರಿಸ್ಥಿತಿ ಹೀಗಿದ್ದರೂ ಅವರು ಇತ್ತೀಚೆಗೆ ಮತ್ತೆ ಹೊಲಿಗೆಗೆ ಬಟ್ಟೆ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಕೋವಿಡ್ʼಗಿಂತಾ ಮೊದಲು, ಅವರು ಸುಲಭವಾಗಿ ತಿಂಗಳಿಗೆ ಸುಮಾರು 8,000-10,000 ರೂಪಾಯಿಗಳನ್ನು ದುಡಿಯುತ್ತಿದ್ದರು, ಈಗ ಅವರು ಸುಮಾರು 6,000-7,000 ರೂಪಾಯಿಗಳವರೆಗೆ ದುಡಿಯುತ್ತಾರೆ. “ಕೆಲವು ದಿನಗಳಲ್ಲಿ ನಾನು 30 ರೂಪಾಯಿಗಳನ್ನು ಗಳಿಸುತ್ತೇನೆ, ಬೇರೆ ದಿನಗಳಲ್ಲಿ 50 ರೂಪಾಯಿಗಳನ್ನು ಗಳಿಸುತ್ತೇನೆ; ನಿನ್ನೆ ನನಗೆ 200 ರೂಪಾಯಿ ಸಿಕ್ಕಿತು. ಈ ಗಳಿಕೆಯಲ್ಲಿ ಹೇಗೆ ಅವಶ್ಯಕತೆಗಳನ್ನು ಹೇಗೆ ಪೂರೈಸಿಕೊಳ್ಳಬೇಕು?” ಎಂದು ಕೇಳುತ್ತಾರೆ.

ದೌಲತ್ ರಾಮ್ 35 ವರ್ಷಗಳ ಹಿಂದೆ ಹೊಲಿಗೆ ಆರಂಭಿಸಿದರು. “ನಾನು ಐದು ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದೇನೆ ಮತ್ತು ಪ್ರತಿದಿನ ಇಲ್ಲಿ ಕುಳಿತು ಕೆಲಸ ಮಾಡುತ್ತೇನೆ” ಎಂದು ಅವರು ತಮ್ಮ ‘ಸ್ಪಾಟ್’ನ ಬಗ್ಗೆ ಹೇಳುತ್ತಾರೆ. ಉತ್ತಮ ಆದಾಯದ ಅವಕಾಶಗಳು ಮತ್ತು ತನ್ನನ್ನು, ತನ್ನ ಹೆಂಡತಿ ಮತ್ತು ನಾಲ್ಕು ಮಕ್ಕಳನ್ನು ಪೋಷಿಸಲು ಹೆಚ್ಚು ಸ್ಥಿರವಾದ ಜೀವನೋಪಾಯದ ಭರವಸೆಯಲ್ಲಿ ಅವನು ಬಂದಿದ್ದಾನೆ. ಅವನ ಹೆಂಡತಿ ಕೆಲವೊಮ್ಮೆ ಅವನ ಟೈಲರಿಂಗ್ ಕೆಲಸದಲ್ಲಿ ಸಹಾಯ ಮಾಡುತ್ತಾಳೆ. ಅವರ ಪುತ್ರರು, 18 ಮತ್ತು 15 ವರ್ಷ ವಯಸ್ಸಿನವರು, ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 11 ಮತ್ತು 8 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಅವರ ಹೆಣ್ಣುಮಕ್ಕಳಿಗೆ 24 ಮತ್ತು 22 ವರ್ಷಗಳು, ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಗ್ರಾಮದಲ್ಲಿ ಟೈಲರ್‌ಗಳಿಗೆ ಹೆಚ್ಚು ಕೆಲಸವಿಲ್ಲ ಎನ್ನುತ್ತಾರೆ ದೌಲತ್ ರಾಮ್. “ಹೆಚ್ಚಿನ ಗ್ರಾಹಕರು ಆಲ್ಟ್ರೇಶನ್‌ ಮಾಡಲು ಬಟ್ಟೆಗಳನ್ನು ನೀಡುತ್ತಾರೆ ಆದರೆ ನಂತರ ಬೇಗನೆ ಹಣ ಪಾವತಿಸುವುದಿಲ್ಲ. ‘ ಹೀಗಿದ್ದರೂ ನಾವು ಹಳ್ಳಿಯನ್ನು ತೊರೆಯಲು ಹೋಗುತ್ತಿಲ್ಲ’ ಎಂದು ಹೇಳುತ್ತಿದ್ದರು! ಹಳ್ಳಿಯಲ್ಲಿ ಉಳಿಯುವುದು ಅದರ ಸಮಸ್ಯೆಗಳನ್ನು ಹೊಂದಿದೆ ಮತ್ತು ನಗರಗಳಲ್ಲಿ ಉಳಿಯುವುದು ಸಹ ಅದರ ಸಮಸ್ಯೆಗಳನ್ನು ಹೊಂದಿದೆ ಎಂದು ನಾನು ತಿಳಿದುಕೊಂಡಿದ್ದೇನೆ,” ಎಂದರು.

Editor's note

ಅಮಾಯ ಭಲೋತ್ರಾ ಹರಿಯಾಣದ ಸೋನಿಪತ್‌ನಲ್ಲಿರುವ ಒ.ಪಿ. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಮಾಧ್ಯಮ ಅಧ್ಯಯನದ ಎರಡನೇ ವರ್ಷದ ವಿದ್ಯಾರ್ಥಿ. ಅವರು 2021 ರಲ್ಲಿ PARI ಶಿಕ್ಷಣದಲ್ಲಿ ತರಬೇತಿ ಪಡೆದಿದ್ದಾರೆ ಮತ್ತು ಅಂಗಡಿಗಳಿಲ್ಲದ ಟೈಲರ್‌ಗಳಂತಹ ಮುಕ್ತ ಮಾರುಕಟ್ಟೆಯ ಕೆಲಸಗಾರರು ಎದುರಿಸುತ್ತಿರುವ ತೊಂದರೆಗಳನ್ನು ತಿಳಿದುಕೊಳ್ಳಲು ಬಯಸಿದ್ದರು. "ನಾನು ಈ ಕಾರ್ಮಿಕರನ್ನು ನಗರದಾದ್ಯಂತ ಇವರ ನಡುವೆ ಹಾದುಹೋಗುತ್ತೇನೆ ಮತ್ತು ಅವರ ಜೀವನದ ಬಗ್ಗೆ ನನಗೆ ಕುತೂಹಲವಿತ್ತು. PARI ಯೊಂದಿಗೆ ಕೆಲಸ ಮಾಡುವುದರಿಂದ, ನಾನು ಮಾತನಾಡಿದ್ದನ್ನು ಅವರು ಕೇಳುತ್ತಾರೆಯೇ? ಎನ್ನುವುದನ್ನು ಖಚಿತಪಡಿಸಿಕೊಳ್ಳದೆ, ನಾನು ಅವರ ಪರವಾಗಿ ಮಾತನಾಡದಿರುವ ಪ್ರಾಮುಖ್ಯತೆಯನ್ನು ಅರಿತು ಕಲಿತಿದ್ದೇನೆ.

ಅಶ್ವಿನಿ ಬಿ. ವಡ್ಡಿನಗದ್ದೆ
ಅಶ್ವಿನಿ ಬಿ. ಅವರು ಬೆಂಗಳೂರು ಮೂಲದ ಅಕೌಂಟೆಂಟ್‌ ಆಗಿದ್ದು, ಹವ್ಯಾಸಿ ಬರಹಗಾರರು ಮತ್ತು ಅನುವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ.